CPIML Liberation Karnataka

CPIML Liberation Karnataka
CPIML LIBERATION KARNATAKA

ಶುಕ್ರವಾರ, ಜುಲೈ 15, 2016

ಎಂ ಎಲ್ ಅಫ ಡೇಟ್- ಸಿಪಿಐ (ಎಂ- ಎಲ್) | ML UPDATE 29 / 2016

ಎಂ ಎಲ್ ಅಫ ಡೇಟ್- ಸಿಪಿಐ (ಎಂ- ಎಲ್) | ML UPDATE 29/2016

ಎಂ ಎಲ್ ಅಫ ಡೇಟ್
ಸಿಪಿಐ (ಎಂ- ಎಲ್) ಸಾಪ್ತಾಹಿಕ ವಾರ್ತಾಪತ್ರ
ಸಂಪುಟ- 19 | ಸಂಚಿಕೆ- 29 | ಜುಲೈ-12-18- 2016

ಕಾಶ್ಮೀರಿ ಜನತೆಯ ಮೇಲಿನ ದಬ್ಬಾಳಿಕೆಯನ್ನು ನಿಲ್ಲಿಸಿ.

ಕಾಶ್ಮೀರ ಜನತೆಯನ್ನು ಇನ್ನೊಂದು ಸುತ್ತಿನ  ಜನತೆಯ ಪ್ರತಿಭಟನೆಗೆ  ತಳ್ಳಲಾಗಿದೆ. ಪ್ರತಿಭಟನೆಯಲ್ಲಿ ಬರ್ಬರ ಪ್ರಭುತ್ವದ ದಬ್ಬಾಳಿಕೆಯಿಂದಾಗಿ, 32 ಜನ ಸಾವಿಗೀಡಾಗಿದ್ದು ಅನೇಕರು ತೀವ್ರವಾಗಿ ಗಾಯಗೊಂಡಿದ್ದಾರೆ. ಈ ಬಿಕ್ಕಟ್ಟಿಗೆ ಕಾರಣ ಒಬ್ಬ ಯುವ ಮಿಲಿಟೆಂಟ್ ಬುರ್ಹನ್ ವಾನಿ ಯ ಸಾವು.  ವಾನಿಯು ಕಾಶ್ಮೀರದಲ್ಲಿ ಜನಪ್ರಿಯ ವ್ಯಕ್ತಿಯಾಗಿದ್ದನು. ಸಾಮಾಜಿಕ ತಾಣಗಳಲ್ಲಿ ಯುವಕರು ಅವನನ್ನು ಹಿಂಬಾಲಿಸುತ್ತಿದ್ದರು. ಆತನ ಶವಯಾತ್ರೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ  ಜನರು ಸೇರಿದ್ದರು.ಕಾಶ್ಮೀರದ ರಸ್ತೆಗಳಲ್ಲಿ ಶೋಕ ಮಾಡುವವರು ಯಾರು  ಮತ್ತು  ಪ್ರತಿಭಟನಾಕಾರರು ಎಂಬುದನ್ನು ಪರಿಗಣಿಸದೆ ಎಲ್ಲರನ್ನೂ ಪ್ಯಾರಾ ಮಿಲಿಟರಿ ಪಡೆಗಳು ದಮನ ಮಾಡುತ್ತದ್ದರು. ಇದು 2010 ರ ಘಟನೆಗಳ ಪುನರಾವರ್ತೆನೆಯಾಗಿದೆ. ಆಗ 112 ಜನ ಪ್ರತಿಭಟನಾಕಾರರನ್ನು ಕೊಲ್ಲಲಾಗಿತ್ತು.

ಬುರ್ನನ್ ವಾನಿಯ ಕೊಲೆಯ ಬಗ್ಗೆ ಅನೇಕ ಪ್ರಶ್ನೆಗಳು ಉತ್ತರ ವಿಲ್ಲ. ಈತ್ತೀಚೆನ ಸರ್ವೋಚ್ಛ ನ್ಯಾಯಾಲಯದ   ಆಜ್ಞೆಯ ಪ್ರಕಾರ ಪ್ರತಿಯೊಂದು ಸಂಘರ್ಷದ ಕ್ರಿಮಿನಲ‍್ ತನಿಖೆ ಮತ್ತು ವಿಚಾರಣೆ ನಡೆಸಬೇಕೆಂದು ಹೇಳಿದೆ. ಸತ್ತವನು ಮಿಲಿಟೆಂಟ್ ಅಥವಾ ನಾಗರೀಕನಾಗಿದ್ದರೂ ಈ ಪ್ರಕ್ರಿಯೆ ನಡೆಯಬೇಕೆಂದಿದೆ. ಆದರೆ ಬುರ್ಹಾನ ಸಾವು ಕಾಶ್ಮೀರದ ಬಗ್ಗೆ ಭಾರತ ಸರ್ಕಾರದ ನೀತಿಯ ಬಗ್ಗೆಯೂ ಪ್ರಶ್ನೆಯನ್ನು ಎತ್ತಿದೆ.  2010 ರಲ್ಲಿ ಬುರ್ಹಾನ್ ಮತ್ತು ಆತನ ಸಹೋದರರನ್ನು ಮತ್ತವರ ಸ್ನೇಹಿತರನ್ನುನಾಗರೀಕ ಪ್ರತಿಭಟನೆಯ ಸಮಯ ದಲ್ಲಿ  ಸೇನಾ ಪಡೆಗಳು ತೀವ್ರವಾಗಿ ಥಳಿಸಿದ್ದರು.  ಕಾಶ್ಮೀರದ ಬಹುಪಾಲು ಪ್ರದೇಶದಲ್ಲಿ ನಾಗರೀಕರು ಇರುವೆಡೆಯಲ್ಲಿ ಸೇನಾ ಮತ್ತು ಅರೆ ಸೇನಾ ಪಡೆಗಳನ್ನು ನಿಯೋಜಿಸಿರುವುದರಿಂದ, ಈ ರೀತಿಯ  ಪರಿಸ್ಥಿತಿತಿ ಸಾಮಾನ್ಯವಾಗಿದೆ.16 ವರ್ಷದವನಾಗಿದ್ದ ವನಿ ಮನೆಯನ್ನು ತೊರೆದು ಪ್ರತ್ಯೇಕತಾವಾದಿ ಸಂಘಟನೆಯೊಂದನ್ನು ಸೇರಿ ವಿದ್ರೋಹದ ಮೂಖ್ಯ ಮುಖವಾದ. ಕಾಶ್ಮೀರದ ಬೀದಿಗಳ ಲ್ಲಿ  ನಿರಾಯುಧರಾದ ಪ್ರತಿಭಟನಾಕಾರನ್ನು ಮಾಮೂಲಿಯಾಗಿ ಕೊಲ್ಲುವುದು ಮತ್ತು ಅಂಗವಿಕಲರನ್ನಾಗಿ ಮಾಡಲಾಗುತ್ತಿದೆ. ಕಾಶ್ಮೀರದಲ್ಲಿ ಇಂದು ಶಾಂತಿಯುತ ಪ್ರತಿಭಟನೆಯ  ಎಲ್ಲಾ ಮಾರ್ಗಗಳನ್ನು ಮುಚ್ಚಲಾಗಿದೆ, ಮತ್ತು ಕಾಶ್ಮೀರಿ ಜನತೆಯ ಆಶೋತ್ತರಗಳನ್ನು ಬಿಂಬಿಸುವ ಯಾವುದೇ ವಿಚಾರಸಂಕಿರಣ ಅಥವಾ ಘೋಷಣೆ ಕೂಗುವದನ್ನು ಸಾಧ್ಯವಾಗದಂತೆ ಮಾಡಲಾಗಿದೆ. ಇಂಟರ್ನೆಟ್ ಅನ್ನು ಸಿಗದಂತೆ ಮಾಡುತ್ತಾ, ಯುವಕರನ್ನು ಪ್ರತಿಭಟನೆ ಮಾಡದೇ ಇದ್ದರೂ, ಥಳಿಸುವುದು ಅಥವಾ ಕೊಲ್ಲಲಾಗುತ್ತಲಾಗುತ್ತದೆ. ಇಂತಹ ಕ್ರಿಯೆಗಳಿಂದ ವ್ಯವಸ್ಥೆಯೇ ಮಿಲಿಟೆನ್ಸಿ ಬೆಳೆಯುವ ನೆಲವನ್ನು ಸೃಷ್ಟಿಸುತ್ತಿದೆ. ವಾಸ್ತವಾಗಿ ವನಿ ಯಾವುದೇ ಭಯೋತ್ಪಾದಕ ಕ್ರಿಯೆಯಲ್ಲಿ ಭಾಗಿಯಾದ ಆಧಾರವಿಲ್ಲ. ಬದಲಾಗಿ ಅಮರನಾಥ ಯಾತ್ರಾರ್ಥೀಗಳ ಮೇಲೆ  ಧಾಳಿ ಮಾಡುವುದಿಲ್ಲವೆಂದು ಹೇಳಿದ್ದನು ಮತ್ತು ಪಂಡಿತ ಸಮುದಾಯ ಕಾಶ್ಮೀರಕ್ಕೆ ವಾಪಸ್ಸು ಬರಬೇಕೆಂದು ಕರೆ ನೀಡಿದ್ದನು. ಆತನ್ನು ಕೊಲ್ಲುವ ಬದಲು ಅವನಂತಹ ಯುವಕರು ಮತ್ತು ಪ್ರತ್ಯೇಕತಾವಾದಿಗಳ ಜತೆ ಕಾಶ್ಮೀರದ ಭವಿಷ್ಯದ ಬಗ್ಗೆ  ಜತೆ ಮಾತುಕತೆ ಸಾಧ್ಯವಿತ್ತು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವನಿಯ ಕೊಲೆಯ ನಂತರ ಜನತೆಯ ಸ್ವಯಂಸ್ಪೂರ್ತಿ  ಶೋಕದ ಪ್ರಕಟನೆ ಯನ್ನು ನಿರೀಕ್ಷಿಸಿರಲಿಲ್ಲ. ಪ್ರತಿಭಟನೆಗಳಿಗೆ ಪಾಕಿಸ್ತಾನವೇ ಕಾರಣ  ವೆಂದು ಹೇಳುತ್ತ ಜನತೆಯನ್ನು ದಮನ ಮಾಡುವುದೇ ಭಯೋತ್ಪಾದನೆಯ ಮೇಲಿನ ಸಮರವೆಂದು ಬಿಂಬಿಸುಸುತ್ತಿರುವುದು, ಸರ್ಕಾರದ ಮಹಾನ್ ಅಪಜಯವೆಂದೇ  ಹೇಳಬೇಕು. ಕಾಶ್ಮೀರಿ  ಸಮಸ್ಯೆ ಪ್ರಾಥಮಿಕವಾಗಿ ರಾಜಕೀಯ ಸಮಸ್ಯೆಯಾಗಿದ್ದು ಅದಕ್ಕೆ ಕಾಶ್ಮೀರಿ ಜನತೆಯ ಆತ್ಮ ಗೌರವ ಮತ್ತು ಸಮ್ಮಾನದ  ಆಧಾರದಲ್ಲಿ ಜನತೆಯೊಡನೆ ಮಾತುಕತೆ ನಡೆಸಬೇಕು.

ಸಂಘ ಪರಿವಾರ ಮತ್ತು ಬಿಜೆಪಿ ಕಾಶ್ಮೀರದಲ್ಲಿ  ಸಂವಿಧಾನದ  370 ನ ವಿಧಿಯನ್ನು ರದ್ದು ಗೊಳಸಬೇಕೆಂದು  ಮಾತುಕತೆ ನಡೆಯಲಾಗದ ಪರಿಸ್ಥಿತಿತಿಯನ್ನು ಸೃಷ್ಟಿಸಿದ್ದಾರೆ.  ವಿಧಿ 370 ಯನ್ನು ರದ್ದುಮಾಡಲು ಒಪ್ಪಿದ್ದ ಉಪಿಏ ಸರ್ಕಾರವೂ ಮಿಲಿಟರಿ ಪರಿಹಾರಕ್ಕೆ ಹೋಯಿತು.   ಕಾಶ್ಮೀರದಲ್ಲಿ  ಇಂದು  ಯಾವುದೇ ಪ್ರತಿಭಟನೆ ನಡೆದರೂ ಅದನ್ನು  ಪಾಕಿಸ್ತಾನ ಪ್ರಚೋಧಿಸುತ್ತಿದೆಯೆಂದು ಹೇಳುತ್ತಾ ಬರ್ಬರ ದಮನವನ್ನು ನಡೆಸುತ್ತಿದ್ದಾರೆ. ಪ್ರತಿಭಟನೆಯಲ್ಲಿ  ನಿರತ ಜನರ ಮೇಲೆ ಚೆರ್ರಿ  PELLET ಗುಂಡುಗಳನ್ನು ಉಪಯೋಗಿಸಿ ಕುರುಡರನ್ನಾಗಿ ಮಾಡಲಾಗುತ್ತಿದೆ , ಇಲ್ಲ ಕೊಲ್ಲಲಾಗುತ್ತಿದೆ. ರಾಜಕೀಯ ವಿಷಯಗಳನ್ನು ಮಸಕು ಮಾಡಿ ಕಾಶ್ಮೀರದ ಸಮಸ್ಯೆಯನ್ನು ಪಾಕಿಸ್ಥಾನದಿಂದ ಪ್ರಾಯೋಜಿತ ಭಯೋತ್ಪಾಧನೆಯೆಂದು ನೋಡಲಾಗುತ್ತಿದೆ.

ಭಾರತದ  ನಾಯಕರುಗಳು ಆಗಾಗ್ಗೆ  ಕಾಶ್ಮೀರದ ಜನತೆಯ ಹೃದಯವನ್ನು ಗೆಲ್ಲುವ ಮಾತನಾಡುತ್ತಾರೆ. ಪಿ.ವಿ. ನರಸಿಂಹರಾವ್  ಪ್ರತ್ಯೇಕತಾವಾದಿಗಳ ಜತೆ ಮಾತುಕತೆಗೆ ಆಕಾಶವೇ ಮಿತಿ ಎಂದಿದ್ದರು. ಪ್ರತ್ಯೇಕತಾವಾದಿಗಳ ಜತೆ ಮಾತುಕತೆ ಸಂವಿಧಾನದ ಚೌಕಟ್ಟಿನಲ್ಲಿ ನಡೆಯುವುದೇ ಎಂದು ವಾಜಪೇಯಿಯವರನ್ನು ಕೇಳಿದ್ದಾಗ ಅವರು ಅದು ಮಾನವೀಯತೆಯ ಚೌಕಟ್ಟಿನಲ್ಲಿ ನಡೆಯುತ್ತದೆ ಎಂದು ಹೇಳಿದ್ಧರು. ಆಶ‍್ವಾಸನೆಗಳು ಪದಪುಂಜಗಳ ಪ್ರಯೋಗದಲ್ಲಿ ಮಾಯವಾಗಿವೆ. ಇಂದು ಕಾಶ್ಮೀರದ ಭಾವನೆಗಳು , ಸಂತಾಪ ಮತ್ತು ಪ್ರತಿಭಟನೆಗಳು ಗುಂಡಿನ ಮತ್ತು ಚರ್ರೆಯಲ್ಲಿ ಅಡಗಿಹೋಗಿವೆ. ಕಾಶ್ಮೀರ ಭಾರತದ  ಅವಿಭಾಜ್ಯ ಅಂಗವೆಂದು ಹೇಳುತ್ತಾ ಅವರು ದೇಶದ ಲ್ಲಿ ಕೆಲವೆಡೆ ಮಾತ್ರ ಕಾಣುವ  ದಮನ ಮತ್ತು ಅವಮಾನವನ್ನು ಮಾಡುತ್ತಿದ್ದಾರೆ. ಎಲ್ಲಕ್ಕಿಂತಲೂ ಹೆಚ್ಚಾಗಿ ಬಾರತದ ವ್ಯವಸ್ಥೆ ಮತ್ತು ಬಹುಪಾಲು ರಾಜಕೀಯ ಪಕ್ಷಗಳು  ಮತ್ತು ಮಾಧ್ಯಮಗಳು ಕಾಶ್ಮೀರಿಗಳ ಭಾವನೆ ಮತ್ತು ಆಶೋತ್ತರಗಳಿಗೆ ಕಿಂಚಿತ್ತೂ ಗೌರವವನ್ನು ನೀಡುತ್ತಿಲ್ಲ.

ತುರ್ತಾಗಿ ಭಾರತದ ಪ್ರಜಾಸತ್ತಾತ್ಮಕ ಮನಸ್ಸಿನ ನಾಗರೀಕರು ತಮ್ಮ ಹೃದಯ ಮತ್ತು ಮನಸ್ಸನ್ನು ಕಾಶ್ಮೀರದ  ಜನತೆಗೆ ತೆರೆದು ಕೊಳ್ಳಬೇಕು. ಅವರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಾಶ್ಮೀರಿ ಜನತೆಯ ಪ್ರತಿಭಟನೆಯ ಬರ್ಬರ ದಮನವನ್ನು  ನಿಲ್ಲಿಸಬೇಕು. ಕಾಶ್ಮೀರಿ ಜನತೆಯ ಜತೆ ಗೌರವಯುತವಾಗಿ ಮಾತನಾಡುವ ವಾತಾವರಣವನ್ನು ಸೃಷ್ಟಿಸಿ ಅವರ ಅಭಿಪ್ರಾಯವನ್ನು ಗೌರಯುತವಾಗಿ ಆಲಿಸಬೇಕು. AFSPA ತಪ್ಪದೆ ವಾಪಸ್ಸು ಪಡೆಯಬೇಕು. ಎಲ್ಲಾ ಘರ್ಷಣೆ ಮತ್ತು ಅತ್ಯಾಚಾರಗಳನ್ನು ಸರಿಯಾದ ತನಿಖೆ ನಡೆಸಬೇಕು. ಕಾಶ್ಮೀರಿಗಳ ಹಕ್ಕಾದ ರಾಜಕೀಯ ಪರಿಹಾರವು ಅವರ ಆಶಯ ಮತ್ತು ಸ್ವಾತತ್ತೆಯ  ಗೌರವದಿಂದ ಕೂಡಿರಬೇಕು.ಇದು ಕೇವಲ ಕಾಶ್ಮೀರ ಅಷ್ಟೇ ಅಲ್ಲ , ದೇಶದ ಮೂಲೆ ಮೂಲೆಯಲ್ಲಿ ನಡೆಯುವಂತಾಗಬೇಕು.

​CPIML Office, 16/3, Muni Kadirappa Layout, Graphite India Road, Hoody, Bangalore - 560048 
Ph: 9483191035    e-mail: mlupdatekannada@gmail.com    Blog: cpiml-karnataka.blogspot.in    fb: cpiml karnataka​

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ