ಎಂ ಎಲ್ ಅಫ್ ಡೇಟ್
ಸಿಪಿಐ (ಎಂ- ಎಲ್) ಸಾಪ್ತಾಹಿಕ ವಾರ್ತಾಪತ್ರ
ಸಂಪುಟ- 19/ ಸಂಚಿಕೆ- 30. ಜುಲೈ 19-25 2016
ಸಂಪಾದಕೀಯ
ಉನಾ ಅಥವಾ ದದ್ರಿ ನಂತಹ ಅತ್ಯಾಚಾರಗಳು ಇನ್ನು ಕೊನೆಗೊಳ್ಳಲಿ.
ಜಾತಿವಾದಿ ಮತ್ತು ಕೋಮುವಾದಿ :
ಗೋರಕ್ಷಕ; ದೋಬಿಕೊರರನ್ನು ನಿಷೇದಿಸಿ.
ಪಶುಗಳ ಚರ್ಮವನ್ನು ಸುಲಿದು ಹದ ಮಾಡುವ ಮತ್ತು ಪಶುಗಳ ದೇಹವನ್ನು ಅಂತಿಮ ಗತಿ ಕಾಣಿಸುವ ಕೆಲಸವನ್ನು ಜಾತಿ ವ್ಯವಸ್ಥೆಯು ದಲಿತರಿಗೆ ನಿಯಮಿಸಿದೆ. ಇದು ಕೊಳಕು ಕೆಲವನ್ನು ಅಸ್ಪೃ ಶ್ಯ ರಾದ ದಲಿತರಿಂದಲೇ ಮಾಡಿಸಲಾಗುತ್ತಿದೆ. ಜುಲೈ 11 ರಂದು ರೈತನೊಬ್ಬನು ತನ್ನ ಸತ್ತ ಹಸುವನ್ನು ಗತಿಕಾಣಿಸಲು ನಾಲ್ವರು ದಲಿತರನ್ನು ನೇಮಿಸಿದ್ದನು. ಇವರನ್ನು ಶಿವಸೇನೆಯ ಗೋರಕ್ಷಕ ದೋಂಬಿಕೊರರು ಅಟಕಾಯಿಸಿದರು. ದಲಿತರು ಗೋವಿನ ಚರ್ಮದ ಕಳ್ಳ ಸಾಗಾಣಿಕೆದಾರರು ಎಂದು ಆರೋಪಿಸುತ್ತಾ ದಲಿತರನ್ನು ನಗ್ನಗೊಳಿಸಿ, ನಾಲ್ಕು ಘಂಟೆಗಳ ಕಾಲ ಥಳಿಸಿ ವೀಡಿಯೋ ರೆಕಾರ್ಡ್ ಮಾಡಿ ಗೋ ಚರ್ಮದ ಕಳ್ಳಸಾಗಾಣಿಗೆದಾರರಿಗೆ ಈ ರೀತಿ ಏಚ್ಚರಿಕೆ ನೀಡಿದರು. ಗುಜರಾತ್ ಪೋಲೀಸರು ಥಳಿಸುವುದನ್ನು ತಡೆದು ಮಧ್ಯಪ್ರವೇಶಿಸಿ ಆರೋಪಿಗಳನ್ನು ಬಂಧಿಸುವ ಬದಲು ಹಲ್ಲೆಗೀಡಾದವರನ್ನೇ ಪ್ರತಿಬಂಧಿಸಿ ತನಿಖೆಗಾಗಿ ಇರಿಸಿಕೊಂಡಿದ್ದರು. ಈ ಘಟನೆಯು ಉತ್ತರಪ್ರದೇಶದ ದದ್ರಿಯಲ್ಲಿ ದೊಂಬಿಕೋರರಿಂದ ಕೊಲೆಗೀಡಾದ ಅಕ್ಲಾಖ್ ನ ಕುಟುಂಬದವರ ಮೇಲೆ ಎಫ್ ಐ ರ್ ದಾಖಲಿಸಲು ಉತ್ತರಪ್ರದೇಶದ ನ್ಯಾಯಾಲಯವೊಂದು ಆದೇಶಿಸಿರುವುದನ್ನು ನೆನಪಿಸುತ್ತದೆ.
ಈ ದೌರ್ಜನ್ಯದ ವಿರುದ್ಧ ಗುಜರಾತ್ ನ ದಲಿತರು ಪ್ರತಿಭಟನೆಯ ದಾರಿ ಹಿಡಿದಿದ್ದಾರೆ. ಅವರು ಸರ್ಕಾರಿ ಕಚೇರಿಗಳ ಮುಂದೆ ಪಶುಗಳ ಶವವನ್ನು ತಂದು ಎಸೆಯುವ ನವೀನ ಹೋರಾಟದ ಮಾರ್ಗವನ್ನು ಕಂಡುಕೊಂಡಿದ್ದಾರೆ. ಇನ್ನು ಮುಂದೆ ದಲಿತರು ಪಶುಗಳ ಶವವನ್ನು ಗತಿಕಾಣಿಸಲು ನಿರಾಕರಿಸುತ್ತಿದ್ದಾರೆ.ಗೋವನ್ನು ತಮ್ಮ ಮಾತೆಯೆಂದು ಕೊಚ್ಚಿಕೊಳ್ಳುವ ಆರೆ ಎಸ್ಎಸ್ , ಶಿವಸೇನೆ ಮುಂತಾದ ಗೋರಕ್ಷಕರೇ ತಮ್ಮ ಮಾತೆಯ ಕ್ರಿಯಾ ಕರ್ಮಗಳನ್ನು ಮಾಡಿಕೊಳ್ಳಬೇಕೆಂದು ಹೇಳುತ್ತಿದ್ದಾರೆ. ಈ ಪ್ರತಿಭಟನೆಯ ವಿಧಾನವು ಜಾತಿವಾದಿ ಮತ್ತು ಕೋಮುವಾದಿ ಗೋರಕ್ಷಕ ಗುಂಪುಗಳ ಬೋಳೆತನವನ್ನು ಬಯಲುಗೊಳಿಸುತ್ತಿದೆ. ಅಲ್ಲದೆ, ಇದು ಅವರ ಗೋಮಾತೆ ಹೇಗೆ ಮರಣದ ನಂತರ ಆಕೆಯ ಶವ ಕೊಳಾಕೊಳಕಾಗಿ ಬಿಡುತ್ತದೆ , ಅವಳನ್ನು ಎಕೆ ದಲಿತರು ಮಾತ್ರವೇ ಮುಟ್ಟಬೇಕಾಗುತ್ತದೆ ಎಂದು ಪ್ರಶ್ನಿಸುತ್ತಿದ್ದಾರೆ.
ಸುಮಾರು 16 ಜನ ದಲಿತರು ಈ ದೌರ್ಜನ್ಯದ ವನ್ನು ಪ್ರತಿಭಟಿಸಿ ಆತ್ಮಹತ್ಯೆಯ ಪ್ರಯತ್ನ ಮಾಡಿದ್ದಾರೆ.ಇದು ಪ್ರಭುತ್ವದಿಂದ ಉಂಟಾಗುತ್ತಿರುವ ದೌರ್ಜರ್ನ್ಯದ ವಿರುದ್ಧ ದ ಲಿತರ ಸಿಟ್ಟುಮತ್ತು ಅವಮಾನವನ್ನು ಬಿಂಬಿಸುತ್ತದೆ. ಪ್ರತಿಭಟನೆಯನ್ನು ತಡೆಯಲು ಗುಜರಾತ್ ಸರ್ಕಾರವು ಕೆಲವು ಪೋಲೀಸ್ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿದೆ. ಇದು ಎನೇನೂ ಸಾಲದು. ಆಗಬೇಕಾದದ್ದು ವಿಡಿಯೋದಲ್ಲಿ ಕಂಡು ಬರುವ ವ್ಯಕ್ತಿಗಳನ್ನು ಬಂಧಿಸಿ, ಬೇಜವಾಬ್ದಾರಿ ತೋರಿದ ಪೋಲೀಸರನ್ನು ಸಹ ಬಂಧಿಸಬೇಕು. ಏಕೆಂದರೆ ಪೋಲೀಸರೂ ದಲಿತರ ಮೇಲಿನ ದೌರ್ಜನ್ಯ ಪಾಲುದಾರರು.ಗುಜರಾತ್ ನ ನವಸರ್ಜನ್ ಟ್ರಸ್ಟ್ 2007- 2010 ರಲ್ಲಿ ; ಗುಜರಾತ್ ನ 1589 ಹಳ್ಳಿಗಳಲ್ಲಿ ಸಮಗ್ರ ಅಧ‍್ಯಯನ ಮಾಡಿ ಅಲ್ಲಿನ ಆಚರಣೆಗಳು ಮತ್ತು ಸ್ಥಿತಿಗತಿಗಳ ಬಗ್ಗೆ ವಿವರವಾದ ವರದಿ ನೀಡಿತ್ತು. ಅದು 98% ಗ್ರಾಮಗಳಲ್ಲಿ ವಿಸ್ತಾರವಾದ ಅಸ್ಪೃ ಶ್ಯತೆಯನ್ನು ಗುರುತು ಮಾಡಿತ್ತು. ಭಾರತದ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಕಂಡುಬರುವ ಅಸ್ಪೃ ಶ್ಯ ಮತ್ತು ದಲಿತ ವಿರೋಧಿ ಮನೋಭಾವ ಗುಜರಾತಿನಲ್ಲಿಯೂ ಕಂಡುಬರುತ್ತದೆ.
ಜಾತಿವಾದಿ ದಲಿತವಿರೋಧಿ ಬೇಧಭಾವ ಮತ್ತು ಹಿಂಸೆಯು ಕೋಮುವಾದಿ ಹಿಂಸೆಯೊಡನೆ ಬಂಧಿಸಲ್ಪಟ್ಟಿದೆ. ಇಂದು ಮುಸಲ್ಮಾನರ ವಿರುದ್ಧ ದ ರಣನೀತಿಗಳು ದಲಿತರ ವಿರುದ್ಧ ಬಹಳ ಕಾಲದಿಂದ ಜಾರಿಯಲ್ಲಿವೆ. ಗೋರಕ್ಷಣೆಯ ಹೆಸರಿನಲ್ಲಿ ನಡೆಯುವ ಸಂಘಟಿತ ಹಿಂಸೆಯ ಗುರಿ ದಲಿತರು ಮತ್ತು ಮುಸ್ಲಿಮರು ಆಗಿದ್ದಾರೆ. ಅವರುಗಳು ಸವರ್ಣೀಯ ಹಿಂದುಗಳು ಹಾಕಿರುವ ಗೋಮಾಂಸ ಭಕ್ಷಣೆಯ ನಿಷೇಧವನ್ನು ಒಪ್ಪುವುದಿಲ್ಲ.ದಲಿತ ಪುರುಷರು ಸವರ್ಣೀಯ ಮಹಿಳೆಯರನ್ನು ಮದುವೆಯಾದರೆ ಹಿಂಸೆ ಎದುರಿಸಬೇಕಾಗುತ್ತ ದೆ. ಅದೇರೀತಿ ಮುಸ್ಲಿಮ್ ಪುರುಷರು ಹಿಂದು ಮಹಿಳೆಯರನ್ನು ಮದುವೆಯಾದಾಗಲೂ ಅಗುತ್ತದೆ.ಇದರ ಅರ್ಥ, ಗೋಹತ್ಯೆ, ಅಂತರ ಜಾತೀಯ ವಿವಾಹ, ಅಂತರ ಧರ್ಮೀಯ ಮದುವೆಗಳು ಜಾತಿ ರಾಜಕೀಯ ಮತ್ತು ಕೋಮುವಾದಿ ರಾಜಕೀಯ ಮತ್ತು ದೊಂಬಿ ಹಿಂಸೆಯ ನೆಪಗಳಾಗುತ್ತವೆ. ಬಿಹಾರದ ಚುನಾವಣೆಗಳಲ್ಲಿ ಇದೇ ಮೋದಿ ಅವರು ಗೋ ರಕ್ಷಣೆಯ ಜಪ ಮಾಡಿ ಕೋಮುವಾದಿ ದ್ವೇಷವನ್ನು ಹಬ್ಬಿಸುವ ಮತ್ತು ಜಾತಿ ಮತ್ತು ಧಾರ್ಮಿಕ ವೋಟ್ ಬ್ಯಾಂಕ್ ಗಳನ್ನು ಗಟ್ಟಿಗೊಳಸುವ ಪ್ರಯತ್ನ ಮಾಡಿದ್ದರು.
ಇಂದು ಬಿಜೆಪಿ ಮತ್ತು ಸಂಘಪರಿವಾರವು ಇಕ್ಕಟ್ಟಿನಲ್ಲಿ ಸಿಕ್ಕಿ ಬಿದ್ದಿದ್ದಾರೆ. ಒಂದೆಡೆ ಗೋ ರಾಜಕೀಯ ಮತ್ತು ಜಾತೀಯ ಮತ್ತು ಕೋಮುವಾದಿ ಹಿಂಸೆಯ ಜತೆಜತೆಗೆ ಹೋಗುತ್ತಿದ್ದಾರೆ. ಅದೇ ಸಮಯದಲ್ಲಿ ಅವರು ಮುಸ್ಲಿಮರ ವಿರುದ್ಧ ದ ರಾಜಕೀಯದಲ್ಲಿ ದಲಿತರನ್ನು ಸೆಳೆಯಲು ಪ್ರಯತ್ನಿಸುತ್ತಾರೆ. ಅವರ ಘರ್ ವಾಪಸಿ ಪ್ರಯತ್ನವು ವಾಸ್ತವವಾಗಿ ಹಿಂದುಗಳಾಗಿ ಅವರ ಮೇಲ್ಜಾತಿಯ ದಬ್ಬಾಳಿಕೆಯನ್ನುಯಾವುದೇ ಪ್ರತಿರೋಧವಿಲ್ಲದೆ ಒಪ್ಪಿಕೊಳ್ಳಿ ಎಂದು ಹೇಳುತ್ತಿದ್ದಾರೆ. ಅವರು ರ್ಯಾಡಿಕಲ್ ಆದ ಅಂಬೇಡ್ಕರ್ ಅವರ ಜಾತಿ ವಿರೋಧಿ: ಕೋಮುವಾದಿ ವಿರೋಧಿ ಪ್ರಜಾಸತ್ತಾತ್ಮಕ ರಾಜಕೀಯವನ್ನು ಹೊರತಾದ ಅಂಬೇಡ್ಕರ್ ಅವರನ್ನು ಸ್ವಾಧಿನಪಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಪದೇ ಪದೇ ಬಿಜೆಪಿ,ಸಂಘ ಮತ್ತು ಹಿಂದುತ್ವ ನಾಯಕರುಗಳು ಮತ್ತು ಗುಂಪುಗಳು ವಾಸ್ತವಾಗಿ ಕುರಿಯ ಚರ್ಮ ಹೊದ್ದ ತೋಳವೆಂದು ದಲಿತರಿಗೆ ಬಯಲಾಗುತ್ತಿದ್ದಾರೆ. ಮೋದಿ ಗುಜರಾತ ನ ಮುಖ್ಯಮಂತ್ರಿಯಾಗಿದ್ದಾಗ, : ಕರ್ಮಯೋಗ: ಎಂಬ ಪುಸ್ತಕವೊಂದನ್ನು ಉಲ್ಲೇಖಿಸುತ್ತಾ: ದಲಿತರು ಕೈನಿಂದ ಮಲ ತೆಗೆಯುವುದನ್ನು ಕರ್ಮಯೋಗವೆಂದು ಬಣ್ಣಿಸಿದ್ದರು.ಇದು ದಲಿತರು ಸ್ವಯಂ ಪ್ರೇರಿತವಾಗಿ ಸಮಾಜಕ್ಕೆ ಮಾಡುವ ಸೇವೆ ಎಂದು ವರ್ಣಿಸಿದ್ದರು. ಬೃಹತ್ ಪ್ರತಿಭಟನೆಯ ನಂತರ ಅವರು ತಮ್ಮ ರಾಗ ಬದಲಿದ್ದರು. ಅವರ ಒರಿಜಿನಲ್ ಹೇಳಿಕೆಗಳು ಸಂಘದ ದಲಿತ ವಿರೋಧಿ ದೌರ್ಜನ್ಯದ ಸಿದ್ಧಾಂತವನ್ನು ಬಯಲು ಮಾಡುತ್ತದೆ. ಇಂತಹ ಸಾಮಾಜಿಕ ವ್ಯವಸ್ಥೆ ಅವರಿಗೆ ಬೇಕು.
ನರೇಂದ್ರ ಮೋದಿಯ ಮಾದರಿ ಗುಜರಾತಿನಲ್ಲಿದಲಿತರು ನಾಚಿಕೆ ಇಲ್ಲದ ಜಾತಿವಾದಿ, ಆಡಳಿತ ಮತ್ತು ಸರ್ಕಾರದ ವಿರುದ್ಧ ಬೀದಿಗಿಳಿದಿರುವಾಗಲೇ , ಮುಂಬಯಿಯಲ್ಲಿ ಅಂಬೇಡ್ಕರ್ ಅವರ ಐತಿಹಾಸಿಕ ದಾದರ್ ಮನೆಯನ್ನು ಅಲ್ಲಿನ ಬಿಜೆಪಿ ಸರ್ಕಾರ ಧ್ವಂಸ ಮಾಡಿದುದರ ವಿರುದ್ಧ ದಲಿತರ ಮತ್ತು ಎಡ ಗುಂಪುಗಳ ಬೃಹತ್ ರ್ಯಾಲಿಯನ್ನು ನಡೆಯಿತು. ಗುಜರಾತ್ ನ ದಲಿತರ ಪ್ರತಿಭಟನೆ ದೇಶಾದ್ಯಂತ ಪ್ರಸರಿಸಬೇಕು. ಗೋರಕ್ಷಣೆಯ ಹೆಸರಿನಲ್ಲಿ ಗುಂಪು ಹಿಂಸೆಯನ್ನು ಹಬ್ಬಿಸುವ ಗೋರಕ್ಷ ದೊಂಬಿಕೋರ ಸಂಸ್ಥೆಗಳನ್ನು ನಿಷೇದಿಸಬೇಕೆಂದು ಪ್ರಜಾಸತ್ತಾತ್ಮಕ ಗುಂಪುಗಳು ಒಗ್ಗೂಡಿ ಒತ್ತಾಯಿಸ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ