ಎಂ ಎಲ್ ಅಪಡೇಟ್
ಸಿ ಪಿ ಐ ಎಂ ಎಲ್ ನ ಸಾಪ್ತಾಹಿಕ ವಾರ್ತಾ ಪತ್ರ.
ಸಂಪುಟ: 19/ ಸಂಚಿಕೆ 31/ ಜುಲೈ 26- 1 ಆಗಸ್ಟ್ 2016
----------------------------------------------
ತಮಿಳು ನಾಡಿನಲ್ಲಿ ಸಿ ಪಿ ಐ ಎಂ ಎಲ್
ಕಾರ್ಯಕರ್ತನ ಶಿರಶ್ಚೇದನ :
ಜಾತಿವಾದಿ - ಕೋಮುವಾದಿ ಸಂಘಟನೆಗಳ ದೌರ್ಜನ್ಯವನ್ನು ಎದುರಿಸಿ
ಗುಜರಾತ್ ನಲ್ಲಿ ಗೋರಕ್ಷಕ ದಾಂಧಲೆಕೋರರು ದಲಿತ ಯುವಕರನ್ನು ನಗ್ನಗೊಳಿಸಿ ಥಳಿಸುದದರ ವಿರುದ್ಧ ಇಡೀ ದೇಶ ಪ್ರತಿಭಟಿಸುತ್ತಿರುವಾಗ, ತಮಿಳುನಾಡಿನಲ್ಲಿ ಜಾತಿವಾದಿ- ಕೋಮುವಾದಿ ಶಕ್ತಿಗಳು ನಡೆಸಿರುವ ಧಿಘ್ರಮೆ ಗೊಳಿಸುವ ಘಟನೆ ವರದಿಯಾಗಿದೆ. ದಲಿತ ಸಮುದಾಯ ವನ್ನಾರ್( ಧೋಭಿ) ಜಾತಿಗೆ ಸೇರಿದ ಸಿಪಿಐಎಂಎಲ್ ಕಾಮ್ರೇಡ್ ಮಾರಿಯಪ್ಪನ್ ಅವರನ್ನು ಶಿರಚ್ಛೇಧನ ಮಾಡಿದ್ದಾರೆ. ಇದನ್ನು ಮಾಡಿದವರು ಹಿಂದು ಮುನ್ನಣಿ ಗೆ ಸೇರಿದವರು. ಇದಕ್ಕೆ ಕಾರಣ- ಜಾತೀಯ ಕಟ್ಟುಪಾಡುಗಳನ್ನು ಪ್ರತಿಭಟಿಸಿದ್ದು.
2013 ರಲ್ಲಿ ಕಾಮ್ರೇಡ್ ಮಾರಿಯಪ್ಪನ್ ನಗರಪಾಲಿಕೆಯ ರಸ್ತೆಯಲ್ಲಿ ವನ್ನಾರ್ ಜಾತಿಯವರು ಶವಯಾತ್ರೆ ಮಾಡಲು ಅವಕಾಶ ನೀಡದಿದ್ದಾಕಾಗಿ ಹಿಂದು ಮುನ್ನಣಿಯ ಸದಸ್ಯರ ವಿರುದ್ಧ ದೂರಿತ್ತಿದ್ದನು. ಇದೇ ಜುಲೈ 20 ರಂದು ಅದೇ ಕೇಸ್ ನ ಹಿಯರಿಂಗ್ ಗೆ ಹೋಗಿದ್ದಾಗ ಅವರ ತಲೆ ಕಡಿಯುವ ಬೆದರಿಕೆ ಹಾಕಿದ್ದರು. ಅದೇ ದಿನ ಅವರು ನಾಪತ್ತೆಯಾಗಿದ್ದರು, ಮರು ದಿನ ಅವರ ತಲೆ ಇಲ್ಲದ ದೇಹ ಪತ್ತೆಯಾಯಿತು.
ಸ್ಥಳೀಯ ಪ್ರಬಲ ಜಾತಿಯವರು ಸ್ಥಳೀಯ ನಗರ ಪಾಲಿಕೆ ವಾರ್ಡಿ ನ ಸಿ ಪಿ ಐ ಎಂಎಲ್ ಪಕ್ಷವು ಚುನಾವಣೆಯಲ್ಲಿ ದಲಿತ ಸಮುದಾಯದ ಅಭ್ಯರ್ಥಿಯನ್ನು ನಿಲ್ಲಿಸಿ ಅಲಿಖಿತ ಬಹಿಷ್ಕಾರವನ್ನು ಉಲ್ಲಂಘಿಸಿದ್ದಕಾಗಿ ಸಿಟ್ಟಾಗಿದ್ದರು. ಮಾರಿಯಪ್ಪನ್ ರನ್ನು ಶಿರಚ್ಛೇಧನ ಮಾಡಿದ ನಾಲ್ವರನ್ನು ಬಂಧಸಲಾಗಿದೆ.
ದೇಶಾದ್ಯಂತ ದಲಿತ ಮತ್ತು ಇತರ ದಮನಿತ ಜಾತಿಗಳವರು ವೋಟು ಮಾಡುವ ಮತ್ತು ಸ್ಪರ್ಧಿಸುವ ಅವಕಾಶವನ್ನು ನಿರಾಕರಿಸುವುದು ಸಾಮಾನ್ಯವಾಗಿದೆ. ಅಂಬೇಡ್ಕರ್ ಹೇಳಿದಂತೆ ಒಬ್ಬ ಮನುಷ್ಯ -ಒಂದು ವೋಟ್ ಮತ್ತು ಒಬ್ಬ ಮನುಷ್ಯ –ಒಂದು ಮೌಲ್ಯವೆಂಬ ತತ್ವವನ್ನು ಪ್ರಭಲ ಜಾತಿಗಳವರು ತಮ್ಮ ಜಾತಿಯ ಸಾಮಾಜಿಕ ಮತ್ತು ರಾಜಕೀಯ ಯಜಮಾನಿಕೆಯ ಪ್ರತಿರೋಧವೆಂದು ಭಾವಿಸುತ್ತಾರೆ.
ಪ್ರಬಲ ಜಾತಿಯವರು ಮತ್ತು ಹಿಂದು ಮುನ್ನಣಿಯವರು ದಮನಿತ ವನ್ನಾರ್ ಜಾತಿಯವರು ತಮ್ಮ ರಾಜಕೀಯ ಮತ್ತು ಸಾಮಾಜಿಕ ಹಕ್ಕುಗಳನ್ನು ಪಡೆದುಕೊಳ್ಳುವುದರ ವಿರುದ್ಧ ಎಚ್ಚರಿಕೆಯನ್ನು ನೀಡಿದ್ದಾರೆ. ಅದಕ್ಕೇ ವನ್ನಾರ್ ಜಾತಿಗೆ ಸೇರಿದ ಕಾಮ್ರೇಡ್ ಮರಿಯಪ್ಪನ್ ಅವರನ್ನು ಶಿರಚ್ಚೇಧನೆ ಮಾಡಲಾಯಿತು.
ಬರ್ಬರ ಶಿರಚ್ಚೇಧನೆ ಜಾತಿ ವ್ಯವಸ್ಥೆಯ ಸೂಚಕ. ಪಂಜಾಬಿನಲ್ಲಿ ಅತ್ಯಾಚಾರಕ್ಕೀಡಾದ ಬಿಯಂತ್ ಸಿಂಗ್ ಮಗಳು ಮಾನಭಂಗ ಮಾಡಿದವರ ವಿರುದ್ಧ ನ್ಯಾಯ ಕೇಳಿದ್ದಕಾಗಿ ನಡೆಸಿದ ಬಿಯಂತ್ ಸಿಂಗ್ ರ ಕೈಕಾಲುಗಳನ್ನು ಕತ್ತರಿಸಿದ ಘಟನೆ ಜ್ಞಾ ಪಕ ಕ್ಕೆ ಈಗ ಬರುತ್ತದೆ.
ಗುಜರಾತ್ ನಲ್ಲಿ ಗೋರಕ್ಷರ ವಿರುದ್ಧ ದಲಿತರು ನಡೆಸುತ್ತಿರುವ ಪ್ರತಿಭಟನೆಯು ಜಾತಿವಾದಿ- ಕೋಮುವಾದಿ ಸಂಘಟನೆಗಳ ವಿರುದ್ಧ ಕೇಂದ್ರಿಕೃತವಾಗಿದೆ. ಅದೇ ರೀತಿಯಲ್ಲಿ ಕಾಮ್ರೇಡ್ ಮಾರಿಯಪ್ಪನ್ ಅವರ ಕೊಲೆ ಹಳ್ಳಿಗಾಡಿನಲ್ಲಿ ಜಾತಿವಾದಿಗಳ ಮತ್ತು ಹಿಂದುತ್ವವಾದಿಗಳ ಸಂಬಂಧವನ್ನು ಎತ್ತಿ ತೋರಿಸುತ್ತದೆ.
ತಮಿಳುನಾಡಿನಲ್ಲಿ ಜಯಲಲಿತ ಅಧಿಕಾರಕ್ಕೆ ಬಂದ ನಂತರ ಜಾತಿವಾದಿ ಮತ್ತು ಕೋಮುವಾದಿ ಶಕ್ತಿಗಳು ಸ್ವೇಚ್ಛೆಯಿಂದ ಸ್ವಾತಂತ್ರ್ಯ ವನ್ನು ಅನುಭವಿಸುತ್ತಿದ್ದಾರೆ. ದಲಿತೇತರ ಮಹಿಳೆಯರನ್ನು ಮದುವೆಯಾದ ದಲಿತ ಯುವಕರನ್ನು ಸರಣಿಯೋಪಾದಿಯಲ್ಲಿ ಕೊಲ್ಲಲಾಗುತ್ತಿದೆ. ಅಂತಹ ಮದುವೆಯಾದ ಯುವಕರ ಹಳ್ಳಿಗಳ ಲ್ಲಿ ಧಾಳಿಗಳು ನಡೆಯುತ್ತಿವೆ. ಈ ವರ್ಷ ಮಾರ್ಚ್ ನಲ್ಲಿ ದಲಿತ ಯುವಕ ಮತ್ತು ಆತನ ಪತ್ನಿಯನ್ನು ನಡು ಹಗಲೇ ಬೀದಿಯಲ್ಲಿ ಖಡ್ಗಗಳಿಂದ ಧಾಳಿ ಮಾಡಲಾಗಿ, ದಲಿತ ಯುವಕ ಸ್ಥಳದಲ್ಲಿಯೇ ಮರಣಹೊಂದಿದನು. ಅನೇಕ ಜಾತಿವಾದಿ ಸಂಘಟನೆಗಳು ಮತ್ತು ಪಿಎಂಕೆ ಪಕ್ಷಗಳು ಸದರಿ ಕೊಲೆಯನ್ನು ಬೆಂಬಲಿಸಿದ್ದಾರೆ ಮತ್ತು ದಲಿತರು ಮತ್ತು ದಮನಿತ ಜಾತಿಗಳ ವಿರುದ್ಧ ದ್ವೇಷವನ್ನು ಕೆರಳಿಸಿದ್ದಾರೆ. ಆದಾಗ್ಯೂ ಆಳುವ ಏಡಿ ಐ ಎಂ ಕೆ ಮತ್ತು ಡಿ ಎಮ್ ಕೆ ಪಕ್ಷಗಳು ಈ ದೌರ್ಜನ್ಯದ ವಿರುದ್ಧ ಮೌನವಾಗಿದ್ದಾರೆ. ಸಂಘಪರಿವಾರ ಮತ್ತು ಹಿಂದು ಮುನ್ನಣಿಯಂತಹ ಸಂಸ್ಥೆಗಳು ಒಟ್ಟಾಗಿ ಕೆಲಸ ಮಾಡುತ್ತಿವೆ. ಉದಾಹರಣೆಗೆ : ಲೇಖಕ ಪೆರುಮಾಳ್ ಮುರುಗನ್ ರ ವಿರುದ‍್ದ ಹಿಂಸಾತ್ಮಕ ಪ್ರತಿಭಟನೆ ಮಾಡಿದ್ದು. ಲೇಖಕರ ಹಕ್ಕನ್ನು ಇತ್ತೀಚಿಗೆ ಮದ್ರಾಸ್ ಉಚ್ಚನ್ಯಾಯಾ ಎತ್ತಿ ಹಿಡಿಯಿತು. ಹಿಂದುತ್ವ ಮತ್ತು ಜಾತೀವಾದಿ ಗುಂಪುಗಳು ನಡೆಸುತ್ತಿರುವ ಸರಣೀ ಬರ್ಬರ ಕೃತ್ಯಗಳು , ಹಿಂದುತ್ವದ ಅಂತ ಸತ್ವವಾದ ಬ್ರಾಹ್ಮಣವಾದ ದ ಭಾಗವೇ ಆಗಿದೆ.
ಇಂದು ದೇಶಾದ್ಯಂತ ಹಿಂಸಾತ್ಮಕ ಜಾತಿವಾದಿ, ಕೋಮುವಾದಿ ಮತ್ತು ಪಿತೃಉಪ್ರಧಾನ ಸಂಗಟನೆಗಳು- ಗೋ ರಕ್ಷಕ ಗುಂಪುಗಳು, ಹಿಂದು ಮುನ್ನಣಿ , ಜಾತಿವಾದಿ ಸಂಘಟನೆಗಳ ವಿರುದ್ಧ ಆಕ್ರಮಣಕಾರಿ ಹೋರಾಟಗಳನ್ನು ಆರಂಭಿಸಬೇಕಾಗಿದೆ. ಅಂತಹ ಸಂಘಟನೆಗಳು ಪ್ರಜಾಸತ್ತಾತ್ಮಕ ಮೌಲ್ಯಗಳ ವಿರುದ್ಧ ಬರ್ಬರ ಧಾಳಿ ಮಾಡಿ ತಪ್ಪಿಸಿಕೊಳ್ಳುವುದಕ್ಕೆ ಅವಕಾಶ ನೀಡಬಾರದು. ಕೇಂದ್ರ ಮತ್ತು ರಾಜ್ಯಗಳಲ್ಲಿ ಇರುವ ಸರ್ಕಾರಗಳು ಅವುಗಳಗೆ ನೀಡುತ್ತಿರುವ ಹಿಂಬಂದಿಯ ಬೆಂಬಲವನ್ನು ನಿಲ್ಲಿಸಬೇಕು. ಜಾತಿ ವಿನಾಶ ಮಾಡಿ, ಜಾತಿವಾದಿ- ಕೋಮುವಾದಿ ದೌ ರ್ಜನ್ಯಗಳನ್ನು ಪ್ರತಿರೋಧಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ